ಸೇವಾ ನಿವೃತ್ತಿ ಹೊಂದಿದ ನೌಕರರ ಸನ್ಮಾನ...
ಸೇವಾ ನಿವೃತ್ತಿ ಹೊಂದಿದ ನೌಕರರ ಸನ್ಮಾನ
ಬೈಲಹೊಂಗಲ- ಸಾರಿಗೆ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಗೊಂಡ ನೌಕರರು ತಮ್ಮ ನಿವೃತ್ತಿ ಜೀವನವನ್ನು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ಕಳೆಯಬೇಕೆಂದು ಕೆಎಸ್‌ಆರ್‌ಟಿಸಿ ಬೈಲಹೊಂಗಲ ಘಟಕದ ವ್ಯವಸ್ಥಾಪಕ ಶಿವಪ್ರಸಾದ ಆರ್.ವಸ್ತ್ರದಮಠ ಹೇಳಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರ ನೀರಿಕ್ಷಕ ವೀರಪ್ಪ ದೂ.ಹುದ್ದಾರ ಮತ್ತು ಸಹಾಯಕ ಕುಶಲಕರ್ಮಿಯಾದ ಸುಭಾಶ ಬರಗಾಲಿಯವರು ನಿವೃತ್ತಿಗೊಂಡ ನಿಮಿತ್ಯ ಬೈಲಹೊಂಗಲ ಕೆಎಸ್‌ಆರ್‌ಟಿಸಿ ಘಟಕದಲ್ಲಿ ರವಿವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಿವೃತ್ತರಾದ ವೀರಪ್ಪ ದೂ.ಹುದ್ದಾರ ೩೪ ವರ್ಷ ಮತ್ತು ಸುಭಾಶ ಬರಗಾಲಿಯವರು ೨೨ ವರ್ಷಗಳ ಕಾಲ ಉತ್ತಮ ಸೇವೆಯನ್ನು ಸಲ್ಲಿಸಿದ್ದು, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಬಿ. ಜಿ.ಪುಡಕಲಕಟ್ಟಿ, ಸುರೇಶ ಯರಡ್ಡಿ, ಎಂ.ಡಿ.ಕೆAಚರಾಮನಹಾಳ, ವಾಯ್ ಟಿ.ಬಾಗಾರ,ನೇಸರಗಿ ಸಂಚಾರ ನಿಯಂತ್ರಣ ಅಧಿಕಾರಿ ಶರಣು ಎಸ್. ಮೆಳಕುಂದಿ, ನಾಗೇಶ ಕಾಡೇಶನವರ, ಪಿ.ಟಿ.ಪತ್ತಾರ, ಆಯ್.ಜಿ.ಸಂಬರಗಿ, ಈರಣಗೌಡ ದೊಡ್ಡಗೌಡರ, ಸೋಮಪ್ಪ ಕೊಳದೂರ, ಬಸವಂತಪ್ಪ ಮುರ್ಕಿಭಾಂವಿ, ಶಿವಲಿಂಗಪ್ಪ ಮದನಭಾವಿ, ಸಾರಿಗೆ ಸಂಸ್ಥೆಯ ನೌಕರರು, ಸೇವಾ ನಿವೃತ್ತರ ಕುಟುಂಬದವರು ಉಪಸ್ಥಿತರಿದ್ದರು.
ಪೋಟೊ ಶಿರ್ಷಿಕೆ-
೩೧ಬಿಎಲ್‌ಎಚ್೧
ಬೈಲಹೊಂಗಲ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರ ನೀರಿಕ್ಷಕ ವೀರಪ್ಪ ದೂ.ಹುದ್ದಾರ ಅವರು ನಿವೃತ್ತಿಗೊಂಡ ನಿಮಿತ್ಯ ಬೈಲಹೊಂಗಲ ಕೆಎಸ್‌ಆರ್‌ಟಿಸಿ ಘಟಕದಲ್ಲಿ ರವಿವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಬೈಲಹೊಂಗಲ ಘಟಕದ ವ್ಯವಸ್ಥಾಪಕ ಶಿವಪ್ರಸಾದ ಆರ್.ವಸ್ತ್ರದಮಠ ಸತ್ಕರಿಸಿದರು.