ಬೆಳಗಾವಿ, ಚಿಕ್ಕೋಡಿ ಚುನಾವಣಾ ಅಖಾಡಕ್ಕೆ ಹೊಸಬರ ಎಂಟ್ರಿ! ಬಿಜೆಪಿಯಲ್ಲಿ ವಿರೋಧ, ಕಾಂಗ್ರೆಸ್‌ನಲ್ಲಿ ಸಚಿವರ ಮಕ್ಕಳೇ ಅಭ್ಯರ್ಥಿಗಳು?

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹೈಲೈಟ್ಸ್‌:
ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಖಾಡಕ್ಕೆ ಹೊಸಬರ ಹುರುಪು!
ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಸಾಧ್ಯತೆ
ಬೆಳಗಾವಿಯಲ್ಲಿ ಜಗದೀಶ್‌ ಶೆಟ್ಟರ್‌- ಮೃಣಾಲ್‌ ಹೆಬ್ಬಾಳ್ಕರ್‌ ಕಣಕ್ಕಿಳಿಯುವ ಸಂಭವ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಲೋಕಸಭಾ ಚುನಾವಣಾ ರಾಜಕೀಯ ರಂಗೇರಿದೆ. ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳ ಚುನಾವಣಾ ಅಖಾಡಕ್ಕೆ ಹೊಸಬರು ಹುರುಪು ತುಂಬುವ ಸಾಧ್ಯತೆ ಇದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿ ಹಾಲಿ ಸಂಸದ ಅಣ್ಣಾ ಸಾಹೇಬ್‌ ಜೊಲ್ಲೆಗೆ ಟಿಕೆಟ್‌ ನೀಡಿದ್ದು, ಕಾಂಗ್ರೆಸ್‌ನಿಂದ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಬೆಳಗಾವಿಯಲ್ಲಿ ಬಿಜೆಪಿಯಿಂದ ಜಗದೀಶ್‌ ಶೆಟ್ಟರ್‌, ಕಾಂಗ್ರೆಸ್‌ನಿಂದ ಮೃಣಾಲ್‌ ಹೆಬ್ಬಾಳ್ಕರ್‌ ಕಣಕ್ಕಿಳಿಯುವ ಸಂಭವ ಇದೆ.

Post a Comment

0Comments

Post a Comment (0)