Karnataka Budget 2024 : ಸಿದ್ದರಾಮಯ್ಯ ಬಜೆಟ್ ಅನ್ನು ಕೊಂಡಾಡಿದ ಬಿಜೆಪಿ ಶಾಸಕ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಆಡಳಿತ ಪಕ್ಷದವರು ತಮ್ಮ ಸರ್ಕಾರದ ಬಜೆಟ್ ಅನ್ನು ಹೊಗಳುವುದು, ವಿರೋಧ ಪಕ್ಷದವರು ತೆಗಳುವುದು ಸರ್ವೇ ಸಾಮಾನ್ಯ. ಆದರೆ, ವಿಪಕ್ಷದ ಶಾಸಕರೊಬ್ಬರು ಬಜೆಟ್ ಅನ್ನು ಹೊಗಳಿದರೆ? ಬಿಜೆಪಿಯ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಸಿದ್ದರಾಮಯ್ಯನವರ ಬಜೆಟ್ ಅನ್ನು ಹಾಡಿ ಹೊಗಳಿದ್ದಾರೆ. ಆ ಮೂಲಕ ಬಿಜೆಪಿಯವರನ್ನು ಮುಜುಗರಕ್ಕೀಡು ಮಾಡಿದ್ದಾರೆ.
ಬೆಂಗಳೂರು : 2024 - 25ರ ಸಾಲಿನ ಕರ್ನಾಟಕ ಬಜೆಟ್ ಅನ್ನು ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಫೆ 16) ಮಂಡಿಸಿದರು. ರಾಜ್ಯದ ಆರ್ಥಿಕತೆಯು ಶೇ.6.6ರಷ್ಟು ಬೆಳವಣಿಗೆಯಾಗಲಿದೆ. ರಾಜ್ಯದ ಈ ಶ್ಲಾಘನೀಯ ಬೆಳವಣಿಗೆಯು, ದೇಶದ ಆರ್ಥಿಕತೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುದನ್ನು ದೃಢಪಡಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯ ಆಯವ್ಯಯಕ್ಕೆ ಎಂದಿನಂತೆ ಆಡಳಿತ ಪಕ್ಷದವರು ಶಹಬ್ಬಾಸ್ ಗಿರಿ ಕೊಟ್ಟರೆ, ವಿಪಕ್ಷಗಳು ಅಭಿವೃದ್ಧಿ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್‌ ಎಂದಿದ್ದಾರೆ. "ಬಜೆಟ್ ತಯಾರಿಕೆ ಎನ್ನುವುದು ಗಂಭೀರ ಹಾಗೂ ಪವಿತ್ರವಾದ ಸಾಂವಿಧಾನಿಕ ಕರ್ತವ್ಯ. ಆದರೆ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ಅಡ್ಡಕಸುಬಿ ಬಜೆಟ್‌ನಂತೆ ಕಾಣುತ್ತಿದೆ"ಎಂದು ವಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಇನ್ನು, ಬಿಜೆಪಿ ಸದಸ್ಯರೊಬ್ಬರು ಸಿದ್ದರಾಮಯ್ಯನವರ ಬಜೆಟ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಯಶವಂತಪುರ ಕ್ಷೇತ್ರದ ಶಾಸಕ ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಹತ್ತಿರವಾಗಿರುವ ಎಸ್.ಟಿ.ಸೋಮಶೇಖರ್, ಇಂತಹ ಒಳ್ಳೆಯ ಬಜೆಟ್ ಅನ್ನು ಮಂಡಿಸಿದ ಸಿದ್ದರಾಮಯ್ಯನವರಿಗೆ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.
ಕಸ ಸಂಸ್ಕರಣಾ ಘಟಕವನ್ನು ಸುಮಾರು ಐವತ್ತರಿಂದ ನೂರು ಎಕರೆ ಜಮೀನಿನಲ್ಲಿ ನಗರದಿಂದ ಸ್ಥಳಾಂತರ ಮಾಡುವ ಕೆಲಸಕ್ಕೆ ಚಾಲನೆ ನೀಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಯಶವಂತಪುರ ಭಾಗದಲ್ಲಿ ಸಾರ್ವಜನಿಕರಿಗೆ ಇರುವ ತೊಂದರೆಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನಾನಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ"ಎಂದು ಸೋಮಶೇಖರ್ ಅಭಿಪ್ರಾಯ ಪಟ್ಟರು.
ಕುಡಿಯುವ ನೀರಿಗೆ ಪರಿಹಾರವನ್ನು ಕೊಟ್ಟಿದ್ದಾರೆ, ಕಾವೇರಿ ಐದನೇ ಹಂತದಲ್ಲಿ ಕ್ಷೇತ್ರದ ಕೆಲವು ಭಾಗಗಳಿಗೆ (ನೂರತ್ ಹಳ್ಳಿ) ನೀರಿನ ವ್ಯವಸ್ಥೆ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಸಂಚಾರ ದಟ್ಟಣೆಗೂ ಪರಿಹಾರ ಪ್ರಕಟಿಸಿದ್ದಾರೆ. ದೊಡ್ಡ ರಸ್ತೆಗಳನ್ನು ಡಿಸೆಂಬರ್ ಒಳಗೆ ವೈಟ್ ಟ್ಯಾಪಿಂಗ್ ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದಾರೆ"ಎಂದು ಸೋಮಶೇಖರ್ ಹರ್ಷ ವ್ಯಕ್ತ ಪಡಿಸಿದರು.

ಶ್ರೀ ಮಹಾಂತೇಶ್ ಹಿರೇಮಠ್ ಅವರ ಸಾರಥ್ಯದಲ್ಲಿ
ಕಿತ್ತೂರು ಕರ್ನಾಟಕ ಭಾಗದ ನಂ 1ಚಾನಲ್...


Post a Comment

0Comments

Post a Comment (0)