ಕಾಂಗ್ರೆಸ್ ಹೈಕಮಾಂಡಗೆ ಖಡಕ್ ಎಚ್ಚರಿಕೆ ಕೊಟ್ಟ ಬೆಳಗಾವಿ ಕಾಂಗ್ರೆಸ್!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ ದಲಿತರು ಕೇವಲ ಓಟ ಬ್ಯಾಂಕ್..?

ಚೆನ್ನಮ್ಮನ ಕಿತ್ತೂರು : ಕಳೆದ 50 ವರ್ಷಗಳಲ್ಲಿ ಯಾವುದೇ ಮೀಸಲಾತಿ ನೀಡಿದೆ ಕೇವಲ ದಲಿತರನ್ನ ಓಟ ಬ್ಯಾಂಕ್ ಗಾಗಿ ಮಾತ್ರ ಬಳಸಿಕೊಳ್ಳುವ ನಿಮ್ಮ ಈ ನಿರ್ಧಾರ ಕೈ ಬಿಟ್ಟು ಮೀಸಲಾತಿ ಮೂಲಕ ದಲಿತ ನಾಯಕರಿಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಥಾನಮಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಲಕ್ಷ್ಮೀ ಕೆ. ನಾಗಣ್ಣವರ ಪತ್ರಿಕಾಗೋಷ್ಠಿಯಲ್ಲಿ ಖಡಕ್ ಸಂದೇಶ ನೀಡಿದರು. 
         ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ವಕ್ತಾರರಾದ ಲಕ್ಷ್ಮೀ ನಾಗಣ್ಣವರ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮೀಸಲಾತಿ ಕೊಟ್ಟು ಅನಂತಕುಮಾರ್ ಬ್ಯಾಕೂಡ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡಗೆ ಒತ್ತಾಯ ಮಾಡಿದರು.
        ಕಳೆದ 75 ವರ್ಷಗಳ ಕಾಂಗ್ರೆಸ್ ಇತಿಹಾಸದಲ್ಲಿ ಪಕ್ಷದ ಮೂಲ ಬುನಾದಿಯಾಗಿ ನಿಂತವರು ದಲಿತರು. ಆದ್ರೆ ಕಾಂಗ್ರೆಸ್ ಈವರೆಗೂ ಯಾವುದೇ ರೀತಿಯ ಮೀಸಲಾತಿ ನೀಡಿದೆ ಜೊತೆಗೆ ಪ್ರಾಧಾನ್ಯತೆಯನ್ನು ನೀಡದೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದ್ದೆ ಎಂದು ಆರೋಪಿಸಿದರು.
          ಸದ್ಯ ಪಕ್ಷದ ರಾಷ್ಟ್ರೀಯ ನಾಯಕರಾಗಿ ನಮ್ಮವರೇ ಖರ್ಗೆ ಇದ್ದಾರೆ ಈಗಲಾದರೂ ಇತ್ತ ಒಮ್ಮೆ ಕಣ್ಣು ತರೆದು ನೋಡುವಂತೆ ಮನವಿ ಮಾಡಿಕೊಳ್ಳುವ ಮೂಲಕ ತಮ್ಮಗಾಗುತ್ತಿರುವ ದಶಕಗಳ ಕಡೆಗಣನೆಗೆ ಹರಿಹಾಯ್ದರು.
      ಪ್ರತಿ ಹಂತದಲ್ಲೂ ನೊಂದವರ ಧ್ವನಿಗೆ ಧ್ವನಿಯಾಗಿ ಇಡೀ ತಮ್ಮ ಜೀವನವನ್ನೇ ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿರುವ ಅನಂತಕುಮಾರ್ ಬ್ಯಾಕೂಡ ಈಬಾರಿ ನಮ್ಮ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಟಿಕೆಟ್ ನೀಡಿ ಕಾಂಗ್ರೆಸ್ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಮುದಾಯದಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನು ಲಕ್ಷ್ಮೀ ನಾಗಣ್ಣವರ ನೀಡಿದರು.
       ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯಲ್ಲಪ್ಪ ನಾ. ಮಣ್ಣವಡ್ಡರ, ಸದಸ್ಯರಾದ ಸುಭಾಷ್ ಕೋಲಕಾರ್, ಜಿಲ್ಲಾ ಕಾರ್ಯದರ್ಶಿ ಯಲ್ಲಪ್ಪ ದಾನಪ್ಪನವರ, ಜಿಲ್ಲಾ ಉಪಾಧ್ಯಕ್ಷ ರಮೇಶ್ ರಜಪೂತ, ಪ್ರಧಾನ ಕಾರ್ಯದರ್ಶಿ ಕೃಷ್ಣ ಸಾಲಿಮನಿ, ಮಹಿಳಾ ಪ್ರಧಾನ ಕಾರ್ಯದರ್ಶಿ ಸಂಗೀತಾ ಕಾಂಬಳೆ, ನಾಗಪ್ಪ ಕಲ್ಲವಡ್ಡರ ಹಾಗೂ ಇತರೆ ನಾಯಕರು ಉಪಸ್ಥಿತರಿದ್ದರು.

Post a Comment

0Comments

Post a Comment (0)