*"ಕಿತ್ತೂರಕರ್ನಾಟಕ ರಕ್ಷಣಾ ವೇದಿಕೆ"*
*ರಾಜ್ಯದ ಕಳೆದ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯರವರು ರಾಜ್ಯದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಯ ತೂಗುಸೇತುವೆಯಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಕ್ಕರೆ ಲಾಬಿಗೆ ಶರಣಾಗದೆ ಸರ್ಕಾರದಿಂದ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಯ ಮುಂಬಾಗದಲ್ಲಿ ಡಿಜಿಟಲ್ ಪಾರದರ್ಶಕ ವೇಬ್ರಿಜ್ಯ ನಿರ್ಮಿಸಿ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಬರುವ ಪ್ರತಿ ಸಾಗಾಟದ ವಾಹನಗಳನ್ನು ಕಡ್ಡಾಯವಾಗಿ ಸರ್ಕಾರದ ವೇಬ್ರಿಜ್ಯನಲ್ಲಿ ತೂಕ ಮಾಡುವ ವ್ಯವಸ್ಥೆಯನ್ನು ಸ್ಥಳಿಯ ಎಪಿಎಂಸಿಗೆ ವಹಿಸುವ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯರವರಿಗೆ ಹಾಗು ಸಕ್ಕರೆ ಸಚಿವ ಶ್ರೀ ಶಿವಾನಂದ ಪಾಟೀಲರವರಿಗೆ ರಾಜ್ಯದ ಎಲ್ಲಾ ಕಬ್ಬು ಬೆಳೆಗಾರರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ವೇದಿಕೆಯ ಮುಖ್ಯ ಸಂಘಟಿಕ ಶ್ರೀ ಬಿ.ಎಂ.ಚಿಕ್ಕನಗೌಡರ ಸಲ್ಲಿಸಿದ್ದಾರೆ.*
*ಮಲಪ್ರಭಾ ನದಿಯ ಆಣೆಕಟ್ಟಿನ ಮೇಲ್ಬಾಗದ ಎರಡು ಬದಿಗೆ 1974ರಲ್ಲಿ 11ಏತ ನೀರಾವರಿ ಯೋಜನೆ ಮೂಲಕ 55ಸಾವಿರ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿತ್ತು. ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದರೂ 1995ರಿಂದ ಕ್ರಮೇಣ ಸ್ಥಗಿತಗೊಂಡಿದ್ದು ಕಳೆದ 29ವರ್ಷಗಳಿಂದ ಈ ಕಾಡಾ ವ್ಯಾಪ್ತಿಯ ದಾಖಲಾತಿಯಲ್ಲಿ ಏತನೀರಾವರಿ ಎಂದು ಸೂಚಿಸುವ ಈ ಭೂಕ್ಷೇತ್ರ ಒಣಬೇಸಾಯವಾಗಿತ್ತು.ಈ ಕುರಿತು ಸಾಕಷ್ಟು ಹೋರಾಟಗಳು ನಡೆಯುತ್ತಿದ್ದವು.*
*ಈ 11ಏತ ನೀರಾವರಿ ಯೋಜನೆಗೆ ಕಳೆದ ಬಜೆಟ್ ಅಧಿವೇಶನದಲ್ಲಿ ಯೋಜನೆ ಮರು ನಿರ್ಮಿಸಿ ಬೈಲಹೊಂಗಲ ಸವದತ್ತಿ ತಾಲೂಕಿನ ಈ ಏತನೀರಾವರಿಗೆ ಕಾಯಕಲ್ಪ ನೀಡಿದ ಮುಖ್ಯಮಂತ್ರಿಗಳಿಗೆ ಈ ಭಾಗದ ನಾಗರೀಕರು ಪುರಸ್ಕಾರದ ಸನ್ಮಾನವನ್ನು "ವೀರರಾಣಿ ಬೆಳವಡಿ ಮಲ್ಲಮ್ಮಾಜೀ ಉತ್ಸವ- 2024" ಭವ್ಯ ವೇದಿಕೆಯಲ್ಲಿ ಹಾಲಿ ಶಾಸಕ ಶ್ರೀ "ಮಹಾಂತೇಶ ಶಿ ಕೌಜಲಗಿ"ಯವರಿಗೆ ಸನ್ಮಾನ ಮಾಡುವದರ ಮುಖಾಂತರ ಧನ್ಯವಾದಗಳನ್ನು ಸಲ್ಲಿಸಿದರು.*